ಇತ್ತೀಚೆಗೆ ಭಾರತೀಯರು ಬಂಗಾಳಕೊಳ್ಳಿಯಿಂದ ಚಂದ್ರಶೋಧಕ್ಕಾಗಿ ಉಪಗ್ರಹವೊಂದನ್ನು ಹಾರಿಬಿಟ್ಟರು ಎಂಬ ಸುದ್ದಿ ಕೇಳಿ ಆಶ್ಚರ್ಯವಾಯಿತು. ಚಂದ್ರನ ಮೇಲ್ಮೈ ಅಧ್ಯಯನ ನಡೆಸಿ, ನಂತರ ಭವಿಷ್ಯತ್ ಯೋಜನೆಗಳನ್ನು ಹಾಕಿಕೊಳ್ಳುಲು ಇದರಿಂದ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಭಾರತೀಯರದು ಚಾರಿತ್ರಿಕ ಮಹತ್ವ ತಂದುಕೊಟ್ಟ ಸಾಧನೆ ಎಂದು ಮೆಚ್ಚುಗೆ ಸೂಚಿಸುತ್ತಾನೆ. ಇದಕ್ಕೆ ಆತ ಕಾರಣಗಳನ್ನೂ ನೀಡುತ್ತ, ಅಮೆರಿಕಾದಲ್ಲಿ ಈ ರೀತಿಯ ಅಂತರಿಕ್ಷ ಯೋಜನೆಗೆ ಸುಮಾರು ೧೬ ಬಿಲಿಯನ್ ಡಾಲರ್‌ಗಳ ಖರ್ಚು ಬೀಳಲಿದ್ದು, ಭಾರತೀಯರು ಅದನ್ನು ಕೇವಲ ೭೦೦ ಮಿಲಿಯನ್ ಡಾಲರ್‌ಗಳಲ್ಲಿ ಪೂರ್ಣಗೊಳಿಸಿದರು ಎನ್ನುತ್ತಾನೆ. ಈ ಯಶಸ್ವಿ ಯೋಜನೆಗಾಗಿ ಭಾರತೀಯರನ್ನು ಅಭಿನಂದಿಸುತ್ತ, ಎಲ್ಲ ಭಾರತೀಯರಿಗೂ ತನ್ನ ಗೌರವವನ್ನೂ ಸೂಚಿಸುತ್ತಾನೆ.
ಈ ಎಲ್ಲ ಹಿನ್ನೆಲೆಗಳನ್ನು ನೀಡುವ ಅಹ್ಮದ್ ನಂತರ ಮುಸ್ಲಿಂ ರಾಷ್ಟ್ರಗಳ ಕಡೆಗೆ ಗಮನ ಹರಿಸುತ್ತಾನೆ. ತಮ್ಮ ದೇಶೀಯರಿಗೆ ಕೆಲವು ಪ್ರಶ್ನೆಗಳನ್ನು ಹಾಕುತ್ತಾನೆ. ಮುಸ್ಲಿಂ ರಾಷ್ಟ್ರಗಳು ಪ್ರಸ್ತುತ ಹಾಗೂ ಭವಿಷ್ಯದ ಜೀವನಕ್ಕೆ ಏನು ಕಾಣಿಕೆ ಕೊಟ್ಟಿವೆ? ನಾವಿನ್ನೂ ತಂತ್ರಜ್ಞಾನದಲ್ಲಿ ಹಿಂದುಳಿಯಲು ನಮ್ಮ ಬೌದ್ಧಿಕ ಪ್ರಬುದ್ಧತೆಯ ಕೊರತೆ ಕಾರಣವೆ? ಮುಸ್ಲಿಂ ರಾಷ್ಟ್ರಗಳಲ್ಲಿನ ಮೂರನೆ ದರ್ಜೆ ರಾಜಕೀಯ ಇದಕ್ಕೆ ಕಾರಣವೆ? ಅಥವಾ ನಮ್ಮ ಶಿಕ್ಷಣ ವ್ಯವಸ್ಥೆ ಅಷ್ಟೊಂದು ಕೀಳು ಮಟ್ಟದ್ದೆ? ಹೀಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿ ಆತ್ಮಾವಲೋಕನವೇ ಇದಕ್ಕೆ ಉತ್ತರ ಎನ್ನುತ್ತಾನೆ!
ಅಹ್ಮದ್‌ನ ವಿಚಾರ ಧಾರೆ ಅದ್ಭುತವಾಗಿದೆ. ಆತ ಮತ್ತಷ್ಟು ಮುಂದುವರೆದು ಹೇಳುತ್ತಾನೆ, ದೇಶದಲ್ಲಿ ಹಾಗೂ ವಿಶ್ವಾದ್ಯಂತ ಆಂತರಿಕ ಜಗಳಗಳನ್ನೂ, ಕಲಹಗಳನ್ನೂ ಸೃಷ್ಠಿಸುವಲ್ಲಿ ಪರಿಣತರಾದ ಮುಸ್ಲಿಂ ರಾಷ್ಟ್ರಗಳು, ತಮ್ಮ ತಮ್ಮಲ್ಲೇ ಒಡಕುಗಳನ್ನು ಸೃಷ್ಟಿಸಿಕೊಂಡಿರುವುದು ಮೇಲು ನೋಟಕ್ಕೆ ಕಾಣುತ್ತಿದೆ. ಮುಸ್ಲಿಂ ರಾಷ್ಟ್ರಗಳು ಈ ರೀತಿ ಕಚ್ಚಾಟಗಳಲ್ಲಿ ತೊಡಗಿರುವಾಗ ಬೇರೆ ರಾಷ್ಟ್ರಗಳು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದರ ಮುಂದೊಂದು ಹೆಜ್ಜೆ ಇಡುತ್ತ ಪ್ರಗತಿಯತ್ತ ಸಾಗಿವೆ. ನಾವು ಮಾತ್ರ ಇನ್ನೂ ಪ್ರಿಮಿಟಿವ್ (ಶಿಲಾಯುಗ) ಕಾಲದಲ್ಲೇ ಇದ್ದೇವೆ ಎಂದು ವಿಷಾದಿಸುತ್ತಾನೆ.
ಭಾರತ ಅಣು ಶಕ್ತ ರಾಷ್ಟ್ರವಾಗಿ ಬಳೆಯಲು ಹಾಗೂ ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದಿರುವಾಗ ಅರಬ್ ರಾಷ್ಟ್ರಗಳಿಗೆ ಕಲ್ಲೆಣ್ಣೆಯನ್ನು ಬಿಟ್ಟರೆ ಬೇರೆಯ ಗುರುತೇ ಇಲ್ಲವೇ ಎಂಬ ಆತಂಕ ಕಾಡಲಾರಂಭಿಸಿವೆ ಎಂದು ವಿಷಾದಿಸುತ್ತಾನೆ.
ಭಾರತ ಈ ಮಟ್ಟಕ್ಕೆ ತಂತ್ರಜ್ಞಾನದಲ್ಲಿ ಬೆಳೆಯಲು ಕಾರಣವೇನು. ವಿಜ್ಞಾನ, ತಂತ್ರಜ್ಞಾನದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಮುಂದಿನ ಸಾಲಿಗೆ ಬರಲು ಕಾರಣವೇನು. ಈಗಲೂ ನಮ್ಮ ಬೃಹತ್ ಕೈಗಾರಿಕೆಗಳನ್ನು ಏಷ್ಯನ್ ರಾಷ್ಟ್ರಗಳ ಮಾನವ ಸಂಪನ್ಮೂಲ ನಿರ್ವಹಿಸುತ್ತಿದ್ದು, ಮುಸ್ಲಿಂ ನಾಗರೀಕರು ಈ ಸ್ಥಾನಗಳಿಗೆ ಏಕೆ ಬರುತ್ತಿಲ್ಲ. ಕಾರಣವಿಷ್ಟೇ, ಅರಬ್ ರಾಷ್ಟ್ರಗಳಿನ್ನೂ ಆಲುಗಡ್ಡೆ ಚಿಪ್ಸ್ ಮಾಡುವುದರಲ್ಲೇ ಇವೆ. ಜತೆಗೆ ಮದ್ದು, ಗುಂಡುಗಳನ್ನು ಮಾಡುತ್ತಾರೆ. ಅವುಗಳನ್ನು ತಮ್ಮ ಮೇಲೆ ತಾವೇ ಪ್ರಯೋಗಿಸಿಕೊಳ್ಳುತ್ತಾರೆ ಎಂದು ಬೇಸರಿಸುತ್ತಾನೆ.
ಭಾರತೀಯರ ಬಗ್ಗೆ ಆತ ಹೇಳುತ್ತ, ನಾವೇನೇ ಕೆಟ್ಟ ಹೆಸರು, ಅಭಿಪ್ರಾಯಗಳನ್ನು ಹೊಂದುತ್ತಿದ್ದರೂ, ಭಾರತೀಯರು ಮಾತ್ರ ವಿಶ್ವದ ಕಣ್ಣಲ್ಲಿ ತುಂಬ ಒಳ್ಳೆಯವರಂದು ಪ್ರಖ್ಯಾತಿ ಪಡೆಯುತ್ತಿದ್ದಾರೆ. ನಾವು ತಪ್ಪು ತಿಳಿದಿದ್ದೆವು, ಭಾರತದಲ್ಲಿ ಕೇವಲ ವಾಹನ ಚಾಲಕರು, ಕೇಮಾ ಆಹಾರ (ಒಂದು ಬಗೆಯ ತಿನಿಸು), ಕೆಚಪ್‌ಗಳನ್ನು ಮಾಡಲು ನಿರತರಾಗಿದ್ದಾರೆ ಎಂದು. ಆದರೆ ಭಾರತೀಯರು ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಜಗತ್ ಪ್ರಸಿದ್ಧ ಎಂಜಿನಿಯರ್‌ಗಳು, ವಿಜ್ಞಾನಿಗಳು, ವ್ಯವಸ್ಥಾಪಕರು, ಚಿಂತಕರು, ಸಾಹಿತಿಗಳು ಭಾರತವನ್ನು ಮುನ್ನಡೆಸುತ್ತಿದ್ದಾರೆ. ಇತ್ತೀಚೆಗಂತೂ ಅತಿ ದೊಡ್ಡ ಹೆಜ್ಜೆಯನ್ನು ಇಟ್ಟು ಚಂದ್ರನ ಮೇಲೂ ತಮ್ಮ ಕಾಲನ್ನು ಇಟ್ಟುಬಿಟ್ಟಿದ್ದಾರೆ. ಹಾಗಾಗಿ ನಾವು ನಮ್ಮ ಚಿಂತನಾ ಕ್ರಮಗಳನ್ನು ಬದಲಿಸಿಕೊಳ್ಳಬೇಕು. ಭಾರತೀಯರೊಂದಿಗೆ ಸ್ನೇಹ ಬೆಳೆಸಬೇಕು. ವ್ಯಾಪಾರ ಕುದುರಿಸಬೇಕು. ಇಲ್ಲದಿದ್ದರೆ ನಮಗೆ ಗುರುತೇ ಇರುವುದಿಲ್ಲ. ಏಕೆಂದರೆ ಭಾರತೀಯರು ಗುರುತಿಗಾಗಿ ಚಂದ್ರನ ಮೇಲೆ ತಮ್ಮ ಧ್ವಜ ನೆಟ್ಟು ಬಂದಿದ್ದಾರೆ ಎಂದು ಶ್ಲಾಘಿಸಿದ್ದಾನೆ.
ಚಂದ್ರಯಾನದ ಬೃಹತ್ ಸಾಧನೆ ನಮ್ಮ ಕಣ್ಣ ಮುಂದಿದ್ದು, ನಾವಿಂದು ಮುಸ್ಲಿಂ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರನ್ನು ಸರಿಯಾಗಿ ನಡೆಸಿಕೊಳ್ಳಬೇಕು. ಅವರಿಗೆ ಗೌರವ ನೀಡಬೇಕು. ಏಕೆಂದರೆ ಆ ಅರ್ಹತೆ ಅವರಿಗಿದೆ ಎನ್ನುತ್ತಾನೆ.
ನಮಗೆ ಹೊಟ್ಟೆಕಿಚ್ಚಾಗುತ್ತಿದೆ. ಎಲ್ಲ ದೇಶಗಳು ಭೂಮಂಡಲಾಚಗಿನ ಅರಿಯದ ವಿಶ್ವವನ್ನು ಶೋಧಿಸುತ್ತಿದ್ದರೆ, ಮುಸ್ಲಿಂ ರಾಷ್ಟ್ರಗಳಿನ್ನು ಅಕ್ಕ ಪಕ್ಕದ ರಾಷ್ಟ್ರಗಳಲ್ಲಿ ಕಲಹವುಂಟು ಮಾಡಿ, ಅವರ ಮೇಲೆ ಸವಾರಿ ಮಾಡ ಹೊರಟಿವೆಯಲ್ಲ ಎಂದು. ನಾವು ನಕ್ಷತ್ರಗಳನ್ನು ಮುಟ್ಟಬೇಕು. ಇನ್ನು ಪುರಾಣ ಕತೆಗಳಂತೆ ಮದ್ಯಪಾನ ಮಾಡಿ, ರಾಸಲೀಲೆಗಳಲ್ಲಿ ತೊಡಗುವುದಲ್ಲ ಎಂದು ಹೇಳುತ್ತಾನೆ.
ನಮಗೀಗ ಎರಡೇ ಮಾರ್ಗಗಳಿರುವುದು, ಚಂದ್ರನನ್ನು ಮುಟ್ಟುವ ಕನಸಿಗಾಗಿ ದೇವರಲ್ಲಿ ಪ್ರಾರ್ಥಿಸುವುದು, ಇಲ್ಲವ, ನಮ್ಮ ಪಾಪಗಳಿಗಾಗಿ ಕಣ್ಣೀರಿಡುವುದು... ಮುಸ್ಲಿಂ ರಾಷ್ಟ್ರಗಳ ಮಾಧ್ಯಮ ಪ್ರತಿನಿಧಿಯೊಬ್ಬನೇ ಹೀಗೆ ಹಳುತ್ತಿರುವುದಾದರೆ, ಇನ್ನು ಜನ ಸಾಮಾನ್ಯರ ಕಣ್ಣಲ್ಲಿ ಅವರ ಸಮಾಜ ಹೇಗಿರಬಹುದು. ಒಮ್ಮೆ ಅವರಿಗಾಗಿ ಪ್ರಾರ್ಥಿಸೋಣವೆ!






