ಭೂಮಿಯನ್ನು ಬಿಟ್ಟು ವಿಶ್ವದ ಬೇರೆ ಕಡಗಳಲ್ಲಿ ನೀರು ಹುಡುಕುತ್ತ ಹೊರಟ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಮೊದಲು ಕಾಲಿಟ್ಟಾಗ ಏನು ಅನ್ನಿಸಿರಬಹುದು? ಬರಡು ನೆಲ, ಜೀವದ ಸೆಲೆಯೂ ಇಲ್ಲದ ಪರಿಸರ. ಸದಾ ಕಗ್ಗತ್ತಲ ಆಕಾಶ. ಲಕ್ಷಾಂತರ ಕಿಲೋಮೀಟರ್‌ಗಳನ್ನು ದಾಟಿ ಇದಕ್ಕಾಗೇ ನಾವು ಚಂದ್ರನ ಬಳಿಗೆ ಬಂದೆವ ಎಂದು ನಿರಾಸೆಯಾಯಿತೋ?! ಬಹುಷಃ ಆಗಿರಲಾರದು. ಮನುಷ್ಯನಿಗೆ ಹಾಗೆ ನಿರಾಸೆ ಆಗುವುದೇ ಇಲ್ಲ. ಮಹಾತ್ವಾಕಾಂಕ್ಷಿ ಮನುಷ್ಯ ತನಗೆ ಬೇಕಿದ್ದನ್ನು ಖಂಡಿತಾ ದಕ್ಕಿಸಿಕೊಳ್ಳುತ್ತಾನೆ. ಚಂದ್ರನಲ್ಲಿ ನೀರನ್ನು ಅರಸುತ್ತ ಭಾರತವೂ ಚಂದ್ರಯಾನ ಮಾಡುವಂತಾಗಿ, ಮಂಗಳದ ಮೇಲೂ ಕಾಲಿಟ್ಟು, ಅಲ್ಲೆಲ್ಲ ಹುಡುಕಾಡಿ, ತಡಕಾಡಿ ಕೊನೆಗೂ ಭೂಮಿಯಾಚೆಗಿನ ನೀರನ್ನು ಹುಡುಕೇಬಿಟ್ಟಿದ್ದಾನೆ!
ಹೌದು. ಇದು ನಿಜಕ್ಕೂ ಭೂಮಿ ಬಾಯಿ ತೆರೆಯುವಂಥ ಸುದ್ದಿ. ಭೂಮಿಯಾಚೆ ನೀರನ್ನು ಕಂಡುಹಿಡಿದು ಅದನ್ನು ಪಡೆಯುವತ್ತ ಆಗಲೇ ಮನುಷ್ಯ ದಾಪುಗಾಲು ಇಡಲು ಪ್ರಾರಂಭಿಸಿಯೇ ಬಿಟ್ಟಿದ್ದಾನೆ!
ಅಮೆರಿಕಾದ ಮ್ಯಾಕ್ಸ್ ಪ್ಲ್ಯಾಂಕ್ ಇನ್‌ಸ್ಟಿಟ್ಯೂಟ್ ಆಫ್ ರೇಡಿಯೋ ಆಸ್ಟ್ರಾನಮಿಯ ಸಂಶೋಧನಾ ವಿದ್ಯಾರ್ಥಿ ವೈಲೆಟ್ ಇಂಪೆಲ್ಲಿಸರಿ ನೇತೃತ್ವದ ತಂಡ ೧೦೦ ಮೀಟರ್ ಎಫೆಲ್ಸ್‌ಬರ್ಗ್ ರೇಡಿಯೋ ದೂರದರ್ಶಕ ಯಂತ್ರದ ಸಹಾಯದಿಂದ ಭೂಮಿಯಿಂದ ಸುಮಾರು ೧೧.೧ ಬಿಲಿಯನ್ ಜ್ಯೋತಿವರ್ಷಗಳ ದೂರದ ಅಂತರಿಕ್ಷದಲ್ಲಿ ತೇಲುತ್ತಿರುವ ನೀರಿನ ಸಮುಚ್ಛಯವನ್ನು ಶೋಧಿಸಿದ್ದಾರೆ.
ಈ ಶೋಧನೆಯ ಬಗ್ಗೆ ತಿಳಿಯುವ ಮುನ್ನ, ಇದಕ್ಕೆ ಪೂರಕವಾದ ಮತ್ತೊಂದು ವಿಚಾರವನ್ನು ತಿಳಿದರೆ ಉತ್ತಮ. ನಾವು ನೋಡುತ್ತಿರುವ ಸೂರ್ಯನಂತಹ ನಕ್ಷತ್ರಗಳು ಅಂತರಿಕ್ಷದಲ್ಲಿ ಸಾವಿರಾರು ಸಂಖ್ಯೆಯಲ್ಲಿವೆ. ಸೂರ್ಯನಿಗೆ ಹೋಲಿಸಿದರೆ ಗಾತ್ರದಲ್ಲಿ ಸಾವಿರ ಪಟ್ಟು ದೊಡ್ಡದಾದ ನಕ್ಷತ್ರಗಳು ಸಾವಿರಾರಿವೆ. ಇಂತಹ ಸೂರ್ಯನಿಗಿಂತ ದೊಡ್ಡ ನಕ್ಷತ್ರಗಳು ತನ್ನಲ್ಲಿರುವ ಜಲಜನಕವನ್ನು ಉರಿಸುತ್ತ - ಉರಿಸುತ್ತ, ಹಳದಿಕಾಯನಾಗಿ, ಶ್ವೇತಕಾಯನಾಗಿ, ನೀಲಿಕಾಯನಾಗಿ ಹಲವು ಅವತಾರಗಳನ್ನು ಎತ್ತುತ್ತಾ ಸಾಗುತ್ತದೆ. ಹೀಗೆ ಒಂದು ದಿನ ತನ್ನಲ್ಲಿರುವ ಜಲಜನಕವೆಲ್ಲ ಮುಗಿದ ಮೇಲೆ ಅದು ಗಾತ್ರದಲ್ಲಿ ಕುಬ್ಜನಾಗುತ್ತ, ಕೃಷ್ಣಕಾಯವಾಗಿ ಪರಿವರ್ತಿತಗೊಳ್ಳುತ್ತದೆ. ಅಂದರೆ ಕಪ್ಪು ಬಣ್ಣದ್ದು ಎಂದರ್ಥ. ಈ ಕೃಷ್ಣಕಾಯ ಎಷ್ಟು ಸಾಂದ್ರತೆಯನ್ನು ಹೊಂದಿರುತ್ತದೆ ಎಂದರೆ ತನ್ನ ಆಕಾರವನ್ನು ಕಳೆದುಕೊಂಡು ಕೇವಲ ಒಂದು ಗುಂಡು ಸೂಜಿಯ ತಲೆಯ ಗಾತ್ರಕ್ಕೆ ಬಂದಿರುವ ನಕ್ಷತ್ರ, ತೂಕದಲ್ಲಿ ಕೋಟಿ ಭೂಮಿಗಳನ್ನು ತೂಗುತ್ತದೆ. ಈ ಕಾಯದ ಗುರುತ್ವಾಕರ್ಷಣ ಶಕ್ತಿ ಎಷ್ಟು ಅಗಾಧವಾಗಿರುತ್ತದೆ ಎಂದರೆ, ಬೆಳಕೂ ಇದರಿಂದ ತಪ್ಪಿಸಿಕೊಂಡು ಹೋಗಲಾರದು. ಅಂತರಿಕ್ಷದ ಈ ಕೃಷ್ಣಕಾಯ ತನ್ನದೇ ಆಯಸ್ಕಾಂತ ಬಲದಿಂದ ಚಲನೆಗೆ ಒಳಪಟ್ಟು ಸಂಚಾರ ಮಾಡುತ್ತ, ಭೂಮಿಯ ಆಸುಪಾಸು ಹೋಗಿಯೇ ಭೂಮಿಯಲ್ಲಿ ಪ್ರಳಯಗಳಾಗಿ ಶೀತಯುಗ, ಉಷ್ಣಯುಗ ಎದುರಾದವು ಎಂಬ ವಾದವೇ ಇದೆ. ಈ ಮಹತ್ತರ ಅನ್ವೇಷಣೆಯನ್ನು ಮಾಡಿದ್ದಕ್ಕಾಗಿಯೇ ಭಾರತದ ಜಗದೀಶ್ ಚಂದ್ರಭೋಸ್ ಅವರಿಗೆ ನೊಬೆಲ್ ಪರ್ಯಾಯ ಪಾರಿತೋಷಕ ಪ್ರಶಸ್ತಿ ಲಭಿಸಿದ್ದು!
ಈ ಕೃಷ್ಣಕಾಯಗಳು ಜೀವಂತವಾಗಿ ಇರಬೇಕಾದರೂ ಅದಕ್ಕೆ ಆಹಾರ ಬೇಕು. ಹಾಗಾಗಿ ತನ್ನ ಸುತ್ತಮುತ್ತಲಿನ ಅಂತರಿಕ್ಷದಲ್ಲಿನ ಅನಿಲ ಮೋಡಗಳಿಂದ ಅನಿಲಗಳನ್ನು ಸೆಳೆದುಕೊಳ್ಳುತ್ತದೆ. ಅಂತಹ ಒಂದು ಅತಿ ದೊಡ್ಡ ಅನಿಲ ಮೋಡದಲ್ಲೇ ಈಗ ವಿಜ್ಞಾನಿಗಳು ನೀರನ್ನು ಪತ್ತೆ ಹಚ್ಚಿರುವುದು.
ಈ ಮೋಡವನ್ನು ಕ್ವಾಸ್ಸರ್ ಎಂಜಿ ಜೆಒ೪೧೪೦-೫೩೪ ಎಂಬ ಹೆಸರಿಡಲಾಗಿದೆ. ೧೦೦ ಮೀಟರ್ ವಿಸ್ತೀರ್ಣದ ಬೂದು ಗಾಜಿರುವ ರೇಡಿಯೋ ದೂರದರ್ಶಕ ಯಂತ್ರವನ್ನು ಹಿಡಿದು ೧೧.೧ ಬಿಲಿಯನ್ ಜ್ಯೋತಿವರ್ಷಗಳ ದೂರದ ಅನಿಲ ಮೋಡವನ್ನು ಪತ್ತೆ ಹಚ್ಚಲು ಸಾಧ್ಯವೇ ಇಲ್ಲ. ಅದಕ್ಕಾಗಿ ವಿಜ್ಞಾನಿಗಳು ಭೌತಶಾಸ್ತ್ರದ ಸರಳ ನಿಯಮವನ್ನು ಬಳಸಿಕೊಂಡರು. ಮೊಡದ ಹಿಂದೆ ಕಾಣುವ ನಕ್ಷತ್ರ ಪುಂಜವನ್ನೇ ದೊಡ್ಡ ಮಸೂರದಂತೆ ಬಳಸಿಕೊಂಡು ಅದರಿಂದ ಹೊಮ್ಮುವ ಬೆಳಕಿನ ಸಹಾಯದಿಂದ ಅನಿಲ ಮೋಡವನ್ನು ಪತ್ತೆ ಹಚ್ಚಿದರು. ೫೮೦ ದಿನಗಳ ಅತಿ ಕ್ಷೀಣ ಬೆಳಕಿನ ಸೆಲೆಯೊಂದನ್ನು ಹಿಡಿದುಕೊಂಡು ದೂರಕರ್ಶಕಕ್ಕೆ ಕಣ್ಣು ಹಾಕಿಕೊಂಡು ಕೂರುವುದು ಸಾಮಾನ್ಯದ ಮಾತೆ.
ಅಂತೂ ಇಂತು ಮೋಡದ ಅನ್ವೇಷಣೆಯಾಯಿತು. ಇನ್ನು ಅದರಲ್ಲಿ ನೀರಿದಿಯೋ ಇಲ್ಲವೋ ಇಲ್ಲವೋ ಎಂದು ನಿಖರವಾಗಿ ಹೇಗೆ ಹೇಳುವುದು. ಅದಕ್ಕಾಗಿ ರಸಾಯನಶಾಸ್ತ್ರ ಅನುಕೂಲಕ್ಕೆ ಬರುತ್ತದೆ. ಪ್ರತಿಯೊಂದು ಅನಿಲಕ್ಕೂ ಅದರದೇ ಆದ ಗುಣಲಕ್ಷಣವಿರುತ್ತದೆ. ಅದರ ಅಣು ಅಣುವೂ ಅದನ್ನು ಸಾರಿ ಸಾರಿ ಹೇಳುತ್ತದೆ. ಇದನ್ನೇ ನಾವು ಅಣು ಬೀಜಶಾಸ್ತ್ರ ಎಂದು ಕರೆಯುತ್ತೇವೆ. ಆಮ್ಲಜನಕಕ್ಕೇ ಒಂದು ಗೋಚರ ಲಕ್ಷಣ, ಜನಜನಕಕ್ಕೇ ಒಂದು ಲಕ್ಷಣ, ಹೀಗೆ ನೀರಿನ ರಾಸಾಯನಿಕ ಹೆಸರಾದ ಎಚ್೨ಒಗೂ ಒಂದು ಲಕ್ಷಣವಿರುತ್ತದೆ. ಅದನ್ನು ಅಧ್ಯಯನ ಮಾಡಿದ ವೈಲೆಟ್ ಮತ್ತು ಜಾನ್ ಮ್ಯಾಕ್‌ಕೀನ್ ಅನಿಲ ಮೋಡದಲ್ಲಿ ನೀರಿರುವುದಾಗಿ ಪತ್ತೆ ಹಚ್ಚಿದರು.
ವಿಶ್ವ ಸೃಷ್ಟಿಯಾಗಿ ಇಂದಿಗೆ ೧೩.೭ ಬಿಲಿಯನ್ ವರ್ಷಗಳಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬಿಗ್ ಬ್ಯಾಂಗ್ (ಮಹಾಸ್ಪೋಟ) ಆಗಿ ಸರಿಸುಮಾರು ೨.೮ ಬಿಲಿಯನ್ ವರ್ಷದಲ್ಲಿ ಈ ನೀರು ಇರುವ ಅನಿಲ ಮೋಡ ಸೃಷ್ಟಿಯಾಗಿದೆ ಎಂದು ಪತ್ತೆ ಹಚ್ಚಲಾಗಿದೆ. ಇದನ್ನು ಕಂಡು ಹಿಡಿಯುವುದೂ ಸುಲಭ. ಆ ಅನಿಲ ಮೋಡದಿಂದ ಹರಟ ಬೆಳಕಿನ ಕಿರಣ ಭೂಮಿಯ ನಮ್ಮ ವಿಜ್ಞಾನಿಗಳ ೧೦೦ ಮೀಟರ್ ದೂರದರ್ಶಕಕ್ಕೆ ಬಂದು ತಗುಲಲು ೧೧.೧ ಬಿಲಿಯನ್ ಜ್ಯೋತಿವರ್ಷಗಳಾಗಿರುತ್ತದೆ (ಬೆಳಕಿಗೆ ೧೧.೧ ವರ್ಷ). ಅಂದರೆ ಅಷ್ಟು ವರ್ಷ ಹಳೆಯದಾದ, ಇನ್ನೂ ಬಳಕೆಯಾಗದೆ ಹಾಗೆಯೇ ಉಳಿದಿರುವ ನೀರು ಇನ್ನೂ ಉಳಿದಿದೆ ಎಂದಂತಾಯಿತು.
ಈ ಸಂಶೋಧನೆ ಇನ್ನೂ ಹಲವು ಸಂಶೋಧನೆಗಳಿಗೆ ದಾರಿ ತೋರಿಸಿದೆ. ಇದುವರಗೆ ಭೂಮಿ ಬಿಟ್ಟು ಆಚೆಕಡೆ ನೀರು ಇರುವುದೋ ಇಲ್ಲವೋ ಎಂಬ ಅನುಮಾನಕ್ಕೆ ಈಗ ತೆರೆ ಬಿದ್ದಿದೆ. ನೀರು ಭೂಮಿಯಾಚೆಗೂ ಇದೆ. ಈಗ ಎಲ್ಲೋ ೧೧.೧ ಬಿಲಿಯನ್ ಜ್ಯೋತಿವರ್ಷಗಳ ದೂರದಲ್ಲಿ ನೀರಿನ ಸೆಲೆ ಸಿಕ್ಕಿದೆ ಎಂದರೆ ಇನ್ನೂ ಹತ್ತಿರದಲ್ಲಿ ಮನುಷ್ಯನ ಕಗೆಟುಕುವ ದೂರದಲ್ಲೂ ನೀರು ಇದ್ದೇ ಇದೆ ಎನ್ನುವುದೂ ತಳ್ಳಿಹಾಕಲಾರದ ಸಂಗತಿಯಾಗಿದೆ. ಹಾಗಾಗಿ ಈ ಸಂಶೋಧನೆಯು ಅಂತರಿಕ್ಷವನ್ನು ಮತ್ತಷ್ಟು ಆಳವಾಗಿ ಸಂಶೋಧಿಸುವ, ಆಳವಾಗಿ ಬಗೆದು ನೋಡುವ ಮಾನವನ ಚಪಲವನ್ನು ಹೆಚ್ಚಿಸಿದೆ.
ವಿಜ್ಞಾನಿಗಳ ಪ್ರಕಾರ ಈ ಅನಿಲ ಮೋಡವು ಸೂರ್ಯನಿಗಿಂತ ೧೦ ಸಾವಿರ ಪಟ್ಟು ದೊಡ್ಡದು. ಆದರೆ ಸೂರ್ಯನಷ್ಟೇ ಶಾಖವಿರುವ ಲಕ್ಷಣಗಳನ್ನು ತೋರಿಸಿದೆ. ಆದರೆ ವಿಜ್ಞಾನಿಗಳ ವಾದವನೆಂದರೆ, ಸೂರ್ಯನಿಂದ ನಾವು ದೂರ ಸರಿದಂತೆ ಹೇಗೆ ಉಷ್ಣಾಂಶ ಕಡಮೆಯಾಗುವುದೋ, ಹಾಗೆಯೇ ಈ ಅನಿಲ ಮೋಡದಿಂದ ದೂರದಲ್ಲಿ ತಂಪಾದ ನೀರೂ ಸಿಗಬಹುದು. ನೀರು ಆವಿಯ ರೂಪದಲ್ಲಿದ್ದು, ಅದನ್ನು ದ್ರವ ರೂಪಕ್ಕೆ ಪರಿವರ್ತಿಸಿಕೊಳ್ಳುವುದು ದೊಡ್ಡದಲ್ಲ. ಆದರೆ ಸವಾಲಿರುವುದು ಅದರಲ್ಲಲ್ಲ. ೧೧.೧ ಬಿಲಿಯನ್ ಜ್ಯೋತಿವರ್ಷ ದೂರದ ಜಾಗವನ್ನು ತಲುಪುವುದು. ಒಂದು ಜ್ಯೋತಿವರ್ಷವೆಂದರೆ ಬೆಳಕು ೧ ಸೆಂಕೆಂಡಿಗ ೩ ಲಕ್ಷ ಕಿಮಿಗೆ ೧ ವರ್ಷ ಕಾಲ ಸಾಗುವ ದೂರ. ಈ ವೇಗದಲ್ಲಿ ಬೆಳಕಿನ ವೇಗದಲ್ಲಿ ಈ ಅನಿಲ ಮೋಡವನ್ನು ತಲುಪಿದರೂ ನಮಗೆ ೧೧.೧ ವರ್ಷಗಳು ಹಿಡಿಯುತ್ತವೆ. ಅಷ್ಟು ವೇಗವಾಗಿ ಚಲಿಸುವ ವೇಗದ ವಾಹನವನ್ನು ಮನುಷ್ಯನಿಗೆ ಇನ್ನೂ ಶೋಧಿಸಲು ಸಾಧ್ಯವಾಗಿಲ್ಲ. ಅಲ್ಲದೆ ಈ ವೇಗದಲ್ಲಿ ಸಾಗಲು ಮನುಷ್ಯನ ದೇಹ ಸಹಕರಿಸುವುದೂ ಇಲ್ಲ. ಕೇವಲ ಶಬ್ದದ ವೇಗ (ಗಂಟೆಗೆ ೧೨೩೫ ಕಿಮಿ) ದಲ್ಲಿ ಸಾಗುವ ವಿಮಾನಗಳಿದ್ದು, ಅವುಗಳಲ್ಲಿ ಸಾಗುವಾಲೆ ಹಲವು ದೈಹಿಕ ತೊಂದರೆಗಳಾಗುತ್ತವೆ. ಹಾಗಾಗಿ ಬೆಳಕಿನ ವೇಗವನ್ನೂ ಮೀರಿಸಬಲ್ಲ ತಂತ್ರಜ್ಞಾನದ ಶೋಧನೆ, ಹಾಗೂ ದೇಹಕ್ಕೆ ಯಾವ ತೊಂದರೆಯೂ ಇಲ್ಲದಂತ ಮತ್ತೊಂದು ತಂತ್ರಜ್ಞಾನದ ಶೋಧನೆಯಾದರೆ ಮಾತ್ರ ಇದಕ್ಕೆ ಉತ್ತರ ಸಿಕ್ಕಂತೆ.

ಇದಕ್ಕೆ ಇನ್ನೂ ಒಂದು ಪರಿಹಾರವಿದೆ. ರಾಷ್ಟ್ರಕವಿ ಕುವೆಂಪು ಅವರು ತಮ್ಮ ಶ್ರೀ ರಾಮಾಯಣ ದರ್ಶನಂ ಕೃತಿಯಲ್ಲಿ ಮನೋವೇಗದ ಉಲ್ಲೇಖವನ್ನು ಮಾಡುತ್ತಾರೆ. ಲಕ್ಷ್ಮಣನನ್ನು ಬದುಕಿಸಲು ಹಿಮಾಲಯದಿಂದ ಲಂಕಗೆ ಹಾರಿ ಸಂಜೀವಿನಿ ದ್ರವವನ್ನು ತರಲು ಹನುಮಂತನಿಗೆ ರಾಮನಿಗೆ ಹೇಳುತ್ತಾನೆ. ಆದರೆ ಹನುಮಂತ ಗಾಳಿಯಲ್ಲಿ ಹಾರಿ ಹೋಗಿ ತರುವಷ್ಟರಲ್ಲಿ ಕಾಲ ಮಿಂಚಿ ಹೋಗುತ್ತದೆ. ಹಾಗಾಗಿ ಮನೋವೇಗದಲ್ಲಿ ಸಾಗಿ ಸಂಜೀವಿನಿ ತರಲು ಹೇಳುತ್ತಾನೆ. ಹನುಮಂತ ಕ್ಷಣಾರ್ಧದಲ್ಲಿ ಸಂಜೀವಿನಿಯನ್ನು ತಂದು ಲಕ್ಷ್ಮಣನನ್ನು ಉಳಿಸುತ್ತಾನೆ. ಅಂದರೆ, ಭಾರತೀಯ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿರುವ ವೈಜ್ಞಾನಿಕ ಸತ್ಯವೊಂದು ಈಗ ಬಳಕಯಾಗಬಲ್ಲದು. ಮನೋವೇಗ ಇರುವುದು ನಿಜವೇ ಆಗಿದ್ದಲ್ಲಿ ಅನಿಲ ಮೋಡದ ಬಳಿಗೆ ಸಾಗುವುದು ದೊಡ್ಡದೇನಲ್ಲ. ಒಟ್ಟಿನಲ್ಲಿ ಮನುಕುಲದ ಶ್ರೇಯಸ್ಸಿಗಾಗಿ ನೀರಿನ ಸೆಲೆಯ ಬಳಿ ಸಾಗುವುದು ಕ್ಷಿಪ್ರವಾಗಿ ಆಗಬೇಕಿದೆ.
5 ಕಾಮೆಂಟ್‌ಗಳು:
ಭೂಮಿಯಾಚೆಗಿನ ನೀರು, ಒಂದು ಅದ್ಭುತ ಸೃಷ್ಟಿಯೇ ಸರಿ, ಹಾಗು ಮನೋವೇಗ ಇದು ಸಾದ್ಯವಾದರೆ ನಾವು ಸಹ ಹಾರುವ ತಟ್ಟೆಗಳು ಮತ್ತು ಅನ್ಯಗ್ರಹ ಜೀವಿಗಳಿಗೆ ಒಂದು ಸವಾಲಾಗಬಹುದು. ಅವು ಹೇಗೆ ಭೂಮಿಗೆ ಬಂದು ಪ್ರಯೋಗ ನಡೆಸುತ್ತವೆಯೋ ಹಾಗೆಯೇ ನಾವು ಕೂಡ, ಭೂಮಿಯಿಂದ ೧೭ ಜ್ಯೋತಿರ್ವರ್ಷ ದೂರದಲ್ಲಿರುವ ಅನ್ಯಗ್ರಹ ಜೀವಿಗಳ ಆವಾಸ ಸ್ಥಾನದಲ್ಲಿ ಪ್ರಯೋಗಗಳನ್ನು ಮಾಡಬಹುದು.
- ಇಂತಿ
ಮಂಜು ಅಭಿ.
ಈಕವಿ ಬೆಂಗಳೂರು
Thank You Manju.
You are making people like me who are less interested in scine to know more about the subject with your write-ups every other week. Thanks to the article..
Why not yet the blog been updated man? Are you busy or are you ill?
Hi Govind. Illi eno swalpa sari illa. Swalpa busy agiddini. But Shortly I will be back :-)
ಕಾಮೆಂಟ್ ಪೋಸ್ಟ್ ಮಾಡಿ